ಕಲ್ಪತರು ವಿದ್ಯಾ ಸಮಿತಿ (ರಿ)

ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು

ತಿಪಟೂರು - 572201, ತುಮಕುರು ಜಿಲ್ಲೆ, ಕರ್ನಾಟಕ, ಭಾರತ

ಮೂರನೇ ಆವೃತ್ತಿ ಯಲ್ಲಿ 'ನ್ಯಾಕ್' ನಿಂದ ಪುನರ್ಮೌಲ್ಯೀಕರಣಕ್ಕೊಳಪಟ್ಟು "ಬಿ" ಶ್ರೇಣಿ ಶ್ರೇಯಾಂಕ ಪಡೆದಿದೆ, ತುಮಕೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿದೆ ಹಾಗೂ ಯುಜಿಸಿ ಯಿಂದ 12(ಎ), 2(ಬಿ) ಮಾನ್ಯತೆಗೊಂಡಿದೆ

ಎಂಜಿನಿಯರ್‌ಗಳ ದಿನಾಚರಣೆ 15-09-2020


ಶಿಕ್ಷಕರ ದಿನಾಚರಣೆ 05-09-2020


ಪ್ರಾಂಶುಪಾಲರು ನಿವೃತ್ತರಾದರು


ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು


ದಿನಾಂಕ:02-10-2019ರಂದು ನಮ್ಮ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 150ನೇ ಜನ್ಮದಿನಾಚರಣೆ ಹಾಗೂ ಲಾಲ್‍ಬಹದ್ದೂರ್‍ಶಾಸ್ತ್ರಿಯವರ 115ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಇಂದಿನಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ.ಟಿ.ಎಸ್.ಕಾಂತರಾಜಯ್ಯ ವಹಿಸಿದ್ದರು. ಹಿರಿಯ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಕೆ.ಕುಮಾರಸ್ವಾಮಿ, ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಕೆ.ನಿಂಗೇಗೌಡ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಸಿ.ಎಂ.ಎಸ್. ಲೋಕೇಶ್ವರಯ್ಯ ವೇದಿಕೆಯಲ್ಲಿದ್ದು ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್‍ಶಾಸ್ತ್ರಿಯವರ ಜೀವನ ಮೌಲ್ಯಗಳ ಬಗ್ಗೆ ಮಾತನಡಿದರು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಹೆಚ್.ಆರ್.ಧನಂಜಯ, ವಾಣ ಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಎಸ್.ಮಲ್ಲಿಕಾರ್ಜುನ ಪ್ರಸನ್ನ, ಇತಿಹಾಸ ವಿಭಾಗದ ಉಪನ್ಯಾಸಕರಾದ ಡಾ.ಜಿ.ಎಂ.ಲಲಾಟಾಕ್ಷಮೂರ್ತಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಎಂ.ಸಿ.ಯೋಗಾನಂದ, ಕಛೇರಿಯ ಹಿರಿಯ ಸಿಬ್ಬಂದಿ ಚಿಕ್ಕೇಗೌಡ, ಪರೀಕ್ಷಾ ವಿಭಾಗದ ಆನಂದ.ಟಿ.ಆರ್. ಮತ್ತು ಅಧ್ಯಾಪಕರು, ಅಧ್ಯಾಪಕೇತರರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಅಭಿಯಾನ


ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ ವತಿಯಿಂದ "ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಅಭಿಯಾನ"ವನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಕಾಲೇಜಿನ ಆವರಣ ಹಾಗೂ ಬಿ.ಹೆಚ್.ರಸ್ತೆಯ ಇಕ್ಕೆಲದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಆಯ್ದು ಸ್ವಚ್ಛ ಗೊಳಿಸಿದರು. ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಬಿ.ಬಸವರಡ್ಡಿ, ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ ಅಧಿಕಾರಿಗಳು,ವಿದ್ಯಾರ್ಥಿಗಳು, ಅಧ್ಯಾಪಕರು/ ಅಧ್ಯಾಪಕೇತರರು ಪಾಲ್ಲೊಂಡಿದ್ದರು.

ಅಂತರರಾಷ್ಟ್ರೀಯ ಯೋಗ ದಿನ