ಕಲ್ಪತರು ವಿದ್ಯಾ ಸಮಿತಿ (ರಿ)

ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು

ತಿಪಟೂರು - 572201, ತುಮಕುರು ಜಿಲ್ಲೆ, ಕರ್ನಾಟಕ, ಭಾರತ

ಮೂರನೇ ಆವೃತ್ತಿ ಯಲ್ಲಿ 'ನ್ಯಾಕ್' ನಿಂದ ಪುನರ್ಮೌಲ್ಯೀಕರಣಕ್ಕೊಳಪಟ್ಟು "ಬಿ" ಶ್ರೇಣಿ ಶ್ರೇಯಾಂಕ ಪಡೆದಿದೆ, ತುಮಕೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿದೆ ಹಾಗೂ ಯುಜಿಸಿ ಯಿಂದ 12(ಎ), 2(ಬಿ) ಮಾನ್ಯತೆಗೊಂಡಿದೆ

ಕಲ್ಪತರು ಸಂಸ್ಥೆಯ ಬಗ್ಗೆ

 

ತಿಪಟೂರಿನ ಪ್ರತಿಷ್ಠಿತ ಕಲ್ಪತರು ವಿದ್ಯಾಸಂಸ್ಥೆಯು ಹಿಂದುಳಿದ ಗ್ರಾಮೀಣಭಾಗದವರ ಶೈಕ್ಷಣಿಕ ಸೇವೆಗಾಗಿ 1962ರಲ್ಲಿ ಸ್ಥಾಪಿಸಲ್ಪಟ್ಟಿತು.

 

1960ರ ದಶಕದಲ್ಲಿ ತಿಪಟೂರು ಒಂದು ದೊಡ್ಡದಾದ ಹಳ್ಳಿ. ದೊಡ್ಡದಾದ ನಗರಗಳಿಂದ ದೂರವಿದ್ದು ಈ ಭಾಗದ ಯುವಸಮೂಹಕ್ಕೆ ಉನ್ನತಶಿಕ್ಷಣವೆಂಬುದು ಗಗನಕುಸುಮವಾಗಿತ್ತು. ಪಿಯು ನಂತರದ ಶಿಕ್ಷಣ ಬೆಂಗಳೂರು, ಮೈಸೂರಿನಂತ ನಗರಗಳಲ್ಲಿ ಮಾತ್ರ ಲಭ್ಯವಿದ್ದು ಅದು ಉಳ್ಳವರಿಗೆ ಮಾತ್ರ ಸಿಗುತ್ತಿತ್ತು. ಇಂಥ ಕಾಲಘಟ್ಟದಲ್ಲಿ ಸೇವಾಧುರೀಣರಾದ ಶ್ರೀ ಪಲ್ಲಾಗಟ್ಟಿಯವರ ದೂರದರ್ಷಿತ್ವದ ಫಲವಾಗಿ ಅವರು ನೀಡಿದ ಅಪಾರ ಮೊತ್ತದ ದೇಣಿಗೆಯಿಂದಾಗಿ ಈ ಸಂಸ್ಥೆ ಪ್ರಾರಂಭವಾಯಿತು. ಆ ಮಹಾತ್ಮರು ಕಂಡ ಕನಸುಗಳನ್ನು ನನಸಾಗಿಸಲು ನಿಸ್ವಾರ್ಥ ಹೆಗಲು ನೀಡಿದ್ದು ಸಂಸ್ಥಾಪಕ ಪ್ರಾಂಶುಪಾಲರಾದ ಶ್ರೀ ಜೆ.ಆರ್.ಮಹಾಲಿಂಗಯ್ಯನವರು. ಇವರಿಬ್ಬರು ಕಂಡಕನಸೇ ಇಂದು ಬೆಳೆದು ನಿಂತಿರುವ ಬೃಹತ್ ಕಲ್ಪತರು ವಿದ್ಯಾಸಂಸ್ಥೆ."ಕಲ್ಪತರು"ಎಂಬ ಸಾರ್ಥಕ ನಾಮಕರಣ ಮಾಡಿದ್ದು ರಾಷ್ಟ್ರಕವಿ,ಜ್ಞಾನ ಪೀಠ ಪುರಸ್ಕೃತರಾದ ಕುವೆಂಪುರವರು. 

 

ಹೀಗೆ ಸ್ಥಾಪಿತವಾದ ಕಲ್ಪತರು ಕಾಲೇಜು, ರಾಜ್ಯ ಹಾಗೂ ರಾಷ್ಟಮಟ್ಟದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿ ಸೂಜಿಗಲ್ಲಿನಂತೆ ತಿಪಟೂರಲ್ಲದೆ ಸುತ್ತಮುತ್ತಲಿನ ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ತುರುವೆಕೆರೆ, ಅರಸೀಕೆರೆ, ದೂರದ ಚಿಕ್ಕಮಗಳೂರು, ಕಡೂರು, ಹೊಸದುರ್ಗ, ಗಳಿಂದಲೂ ವಿದ್ಯಾರ್ಥಿಗಳನ್ನು ಸೆಳೆಯಿತು. ಸಂಖ್ಯೆ ಬೆಳೆದಂತೆ ಶೈಕ್ಷಣಿಕ ಗುಣಮಟ್ಟ ನಿರ್ವಹಣೆ ಮಾಡಲು1982ರಲ್ಲಿ ಕಲ್ಪತರು ಕಾಲೇಜನ್ನು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಕಲ್ಪತರು ವಿಜ್ಞಾನ ಕಾಲೇಜುಗಳಾಗಿ ವಿಭಜಿಸಲಾಯಿತು. ಮತ್ತೊಂದು ಮೈಲುಗಲ್ಲಾಗಿ ಈ ಭಾಗದ ಮಕ್ಕಳು ತಾಂತ್ರಿಕ ಶಿಕ್ಷಣದಿಂದ ವಂಚಿತರಾಗಬಾರದೆಂಬ ಮಹತ್ವಾಕಾಂಕ್ಷೆಯಿಂದ ಕಲ್ಪತರು ತಾಂತ್ರಿಕ ಶಿಕ್ಷಣ ಕಾಲೇಜನ್ನು ಪ್ರಾರಂಭಿಸಲಾಯಿತು. 

 

2001ನೇ ಇಸವಿಯಲ್ಲಿ, ಸರ್ಕಾರದ ನಿರ್ದೇಶನದಂತೆ ಕಲ್ಪತರು ವಿಜ್ಞಾನ ಕಾಲೇಜನ್ನು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು ಮತ್ತು ಕಲ್ಪತರು ಪದವಿ ಪೂರ್ವ ಕಾಲೇಜು ಎಂದು ವಿಭಜಿಸಲಾಯಿತು. ಇಷ್ಟು ಬೃಹತ್ತಾಗಿ ಬೆಳೆದುನಿಂತಿರುವ ಸಂಸ್ಥೆ ಅಡಿಯಲ್ಲಿಂದು ಮಾಂಟೆಸ್ಸೊರಿ ಶಿಕ್ಷಣದಿಂದ ಹಿಡಿದು ಎಂಟೆಕ್, ಎಂಬಿಎ ವರೆಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಈ ಸಂಸ್ಥೆಯಿಂದ ತಿಪಟೂರು ಎಂಬ ಹೆಸರಿನ ದೊಡ್ಡಹಳ್ಳಿ ಇಂದು ನಗರವೆಂದು ಭೌಗೋಳಿಕವಾಗಿ ಗುರುತಿಸಿಕೊಂಡಿದೆ.ದೊಡ್ಡ ಹೆಸರು ಪಡೆದಿದೆ. ಇಲ್ಲಿಂದ ಶಿಕ್ಷಣ ಪಡೆದ ಲಕ್ಷೋಪಲಕ್ಷ ಜನ ದೇಶವಿದೇಶಗಳಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.

 

ಪ್ರಸ್ತುತದಲ್ಲಿ ಕಲ್ಪತರು ವಿದ್ಯಾಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು:

 

೧. ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು 
೨. ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜು 
೩. ಕಲ್ಪತರು ತಾಂತ್ರಿಕ ಕಾಲೇಜು
೪. ಕಲ್ಪತರು ಶಿಕ್ಷಣ ಮಹಾವಿದ್ಯಾಲಯ
೫. ಕಲ್ಪತರು ಸೆಂಟ್ರಲ್ ಶಾಲೆ
೬. ಕಲ್ಪತರು ಮಾಂಟೆಸ್ಸೊರಿ
೭. ಕಲ್ಪತರು ಪದವಿ ಪೂರ್ವ ಕಾಲೇಜು
೮. ಕಲ್ಪತರು ಸ್ನಾತಕೋತ್ತರ ಕೇಂದ್ರ ಮತ್ತು ಸಂಶೋಧನಾ ಕೇಂದ್ರ

 

ಪ್ರಾಂಶುಪಾಲರು:


ಡಾ. ಎನ್.ಜಗದೀಶ್ ಎಂ.ಎಸ್ಸಿ, ಬಿ.ಎಡ್., ಪಿ.ಹೆಚ್.ಡಿ.,

 

ಡಾ.ಎನ್.ಜಗದೀಶ್ ರವರು ಗಣಿತಶಾಸ್ತ್ರ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಹಾಗೂ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ದಿನಾಂಕ:-30-06-2020 ರವರೆಗೆ ಕಲ್ಪತರು ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

 

ಪ್ರಸ್ತುತ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಅವರಿಗೆ 33 ವರ್ಷಗಳ ಬೋಧನಾ ಅನುಭವವಿದ್ದು, ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಮಹತ್ವಾಕಾಂಕ್ಷೆಯುಳ್ಳವರಾಗಿದ್ದು, ಈ ಹಿಂದೆ ಪ್ರಾರಂಭಿಸಿದ್ದ ಎಲ್ಲ ಉತ್ತಮವಾದ ವಿವಿಧ ಚಟುವಟಿಕೆಗಳನ್ನು ಸಾಥðಕವಾಗುವಂತೆ ಮುಂದುವರಿಸಿಕೊಂಡು ಹೋಗುವ ಮಹದಾಸೆ ಹೊಂದಿರುತ್ತಾರೆ.